Sthanika

Event 

Title:
ಋಗ್ ಉಪಾಕರ್ಮ ಹಾಗೂ ನಾಗರ ಪಂಚಮಿ ಆಚರಣೆ
When:
28.07.2017
Category:
Temple

Description

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ಋಗ್ ಉಪಾಕರ್ಮ ಹಾಗೂ ನಾಗರ ಪಂಚಮಿ ಆಚರಣೆ - ತಾ: 28-07-2017 ಪರಮಪೂಜ್ಯ ಶ್ರೀಮದ್ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಪರಿಪೂರ್ಣಾನುಗ್ರಹದಿಂದ ಸ್ವಸ್ತಿ ಶ್ರೀ ಹೇವಿಳಂಬಿ ನಾಮಸಂವತ್ಸರದ ದಿನಾಂಕ 28-07-2017 ಶುಕ್ರವಾರ ಶ್ರಾವಣ ಶುಕ್ಲ ಪಂಚಮಿಯಂದು ಋಗ್ ಉಪಾಕರ್ಮ ಹಾಗೂ ನಾಗರ ಪಂಚಮಿಯ ಆಚರಣೆಗಳು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಭಗವತ್ ಸಂಕಲ್ಪದಂತೆ ನಡೆಯಲಿರುವುವು. ಸಮಾಜ ಬಾಂಧವರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀದೇವರ ಹಾಗೂ ಶ್ರೀ ನಾಗದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸವಿನಯ ಪ್ರಾರ್ಥನೆ. ಋಗ್ ಉಪಾಕರ್ಮದಲ್ಲಿ ಭಾಗವಹಿಸುವವರು ಪಂಚ ಪಾತ್ರೆ ಮತ್ತು ಉದ್ಧರಣೆಗಳನ್ನು ತರಬೇಕಾಗಿ ವಿನಂತಿ. ಕಾರ್ಯಕ್ರಮಗಳ ವಿವರ: ಬೆಳಿಗ್ಗೆ 6:00 ಕ್ಕೆ: ಋಗ್ ಉಪಾಕರ್ಮ ಬೆಳಿಗ್ಗೆ 8:30 ಕ್ಕೆ: ನಿತ್ಯ ಪೂಜೆ ಬೆಳಿಗ್ಗೆ 9:00 ಕ್ಕೆ: ಉಪಹಾರ ಬೆಳಿಗ್ಗೆ 9:30 ಕ್ಕೆ: ಗಣಪತಿ ಹೋಮ ಬೆಳಿಗ್ಗೆ 10:30 ಕ್ಕೆ: ಆಶ್ಲೇಷ ಬಲಿ ಮತ್ತು ಹೋಮ ಬೆಳಿಗ್ಗೆ 12:00 ಕ್ಕೆ: ಪೂರ್ಣಾಹುತಿ ಮಧ್ಯಾಹ್ನ 12:15 ಕ್ಕೆ: ಶ್ರೀ ನಾಗದೇವರಿಗೆ ತಂಬಿಲ ಪೂಜೆ ಮಧ್ಯಾಹ್ನ 12:30 ಕ್ಕೆ: ಶ್ರೀ ದೇವರಿಗೆ ಮಹಾಪೂಜೆ, ಮಹಾ ಮಂಗಳಾರತಿ. ಮಧ್ಯಾಹ್ನ 1:30 ಕ್ಕೆ ತೀರ್ಥ ಪ್ರಸಾದ ವಿನಿಯೋಗ ಮಹಾ ಪ್ರಸಾದ ಭೋಜನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇವಾ ವಿವರ ಸರ್ವ ಸೇವೆ: ರೂ. 1001/- ಅನ್ನ ಸಂತರ್ಪಣೆ: ರೂ. 501/- ಆಶ್ಲೇಷ ಬಲಿ: ರೂ. 300/- ತಂಬಿಲ ಸೇವೆ: ರೂ. 200/- ವಿಶೇಷ ಪೂಜೆ: ರೂ. 101/- ಆಡಳಿತ ಮಂಡಳಿ-ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ – ಬೆಂಗಳೂರು