Events

Event 

Title:
ಬೆಂಗಳೂರಿನಲ್ಲಿ ವಧೂವರರ ಸಮಾವೇಶ
When:
01.04.2018
Category:
Marriage

Description

ಪ್ರಿಯ ಬಾಂಧವರೇ,

ವಿಷಯ : ದಿನಾಂಕ 01-04-2018 ರಂದು ಆಯೋಜಿಸಿರುವ ಭಾವೀ ವಧೂವರರ ಸಮಾವೇಶಕ್ಕೆಆಮಂತ್ರಣ

ನಮ್ಮ ಸಮಾಜದ ಅಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸುವಂತದ್ದು ನಮ್ಮೊಳಗೇ ನಡೆಯುವ ಮದುವೆಗಳು ಎನ್ನುವುದು ನಮ್ಮೆಲ್ಲರಿಗೂ ವೇದ್ಯವಾದ ವಿಚಾರವೇ ಆಗಿದೆ. ಈ ವಿಷಯದಲ್ಲಿ ನಮ್ಮ ಸಮಾಜದಲ್ಲಿನ ಎಲ್ಲಾ ಚಿಂತಕರು ಗಂಭೀರವಾಗಿ ಯೋಚಿಸುತ್ತಿರುವುದಕ್ಕೆ ನಮ್ಮಲ್ಲಿ ಕಾಲಕಾಲಕ್ಕೆ ಆಯಾ ಸಂಘಗಳು ಭಾವೀ ವಧೂವರರ ಸಮಾವೇಶವನ್ನು ಆಯೋಜಿಸುತ್ತಿರುವುದು ಮತ್ತು ವಿವಾಹ ವಿಚಾರಕ್ಕಾಗಿಯೇ ಪ್ರತ್ಯೇಕ ಸಮಿತಿಯನ್ನು ರಚಿಸಿಕೊಂಡು ಸಂಬಂಧ ಸೇತುವಾಗುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿರುವುದೇ ಸಾಕ್ಷಿಯಾಗಿದೆ.

ಅಂತಹುದೇ ಪ್ರಯತ್ನದ ಅಂಗವಾಗಿ ನಮ್ಮ ಸಭೆಯು ಕಳೆದ ವರ್ಷ 2017 ರ ಜೂನ್ ತಿಂಗಳಿನಲ್ಲಿ ಆಯೋಜಿಸಿದ್ದ ಭಾವೀ ವಧೂವರರ ಸಮಾವೇಶದಲ್ಲಿ ಸುಮಾರು 42 ಭಾವೀ ವಧುಗಳು ಹಾಗೂ ಸುಮಾರು 46 ಭಾವೀ ವರರು ತಮ್ಮ ಪೋಷಕರೊಂದಿಗೆ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದಿದ್ದರು. ಈ ಅದ್ಭುತ ಯಶಸ್ಸಿನಿಂದ ಪ್ರೇರೇಪಿತರಾಗಿ ದಿನಾಂಕ 01-04-2018 ರ ಭಾನುವಾರದಂದು ಬೆಳಿಗ್ಗೆ 8:30 ರಿಂದ ಸಂಜೆ 4:00 ರವರೆಗೆ ನಮ್ಮ ಸಭೆಯ ಆವರಣದಲ್ಲಿ ಇಂತಹದೇ ಸಮಾವೇಶವನ್ನು ಈ ವರ್ಷವೂ ಆಯೋಜಿಸುವುದಾಗಿ ಸಂಕಲ್ಪಿಸಿದ್ದೇವೆ. ತಮ್ಮಲ್ಲಿ ವಿವಾಹಯೋಗ್ಯ ವಧೂವರರಿದ್ದಲ್ಲಿ ಈ ಸಮಾವೇಶದಲ್ಲಿ ಪಾಲ್ಗೊಂಡು ಮತ್ತು ಈ ವಿಷಯವನ್ನು ತಮ್ಮ ವ್ಯಾಪ್ತಿಯಲ್ಲಿರುವ ವಿವಾಹಾಕಾಂಕ್ಷಿಗಳಲ್ಲಿ ಪ್ರಚುರಪಡಿಸಿ ಅವರನ್ನೂ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಿ ಈ ಕಾರ್ಯಕ್ರಮವನ್ನು ಫಲಪ್ರದಗೊಳಿಸುವಲ್ಲಿ ಸಹಕರಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.

ಈ ಪ್ರಯತ್ನವು ನಮ್ಮ ಸಮಾಜದ ಅಭಿವೃದ್ಧಿಗಾಗಿ ಒಂದು ಉಚಿತ ಸೇವೆಯಾಗಿದ್ದು ಬೆಂಗಳೂರಿನ ಹೊರಗಿನ ಪ್ರದೇಶದಿಂದ ಹಿಂದಿನ ದಿವಸ ಬರುವವರಿದ್ದರೆ ಮೊದಲೇ ತಿಳಿಸಿದಲ್ಲಿ ಜ್ಞಾನಶಕ್ತಿ ಮಂಟಪದಲ್ಲಿ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.

ಈ ಸಮಾವೇಶದ ಹೆಸರೇ ಸೂಚಿಸುವಂತೆ ಭಾವೀ ವಧೂವರರ ಸ್ವಯಂ ಉಪಸ್ಥಿತಿಯು ಇಲ್ಲಿ ಅತ್ಯವಶ್ಯಕವಾಗಿದ್ದು ಹೆಚ್ಚಿನ ಮಾಹಿತಿ ಮತ್ತು ಅಭ್ಯರ್ಥಿಗಳು ಬರುವಾಗ ತರಬೇಕಾಗಿರುವ ವಿವರಗಳಿಗಾಗಿ ಸಂಪರ್ಕಿಸಿ:


ಶ್ರೀ ಎ. ಶಿವ ರಾವ್ – 9880570747
ಶ್ರೀಮತಿ ಪಿ. ಮಾಲತಿ ರಾವ್ – 9886924913
ಶ್ರೀಮತಿ ಬಿ. ವಿದ್ಯಾ ರಾವ್ – 9731015176
ಇಮೈಲ್: This e-mail address is being protected from spambots. You need JavaScript enabled to view it


ವಂದನೆಗಳೊಂದಿಗೆ,

ಕಾರ್ಯದರ್ಶಿ
ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಸಭಾ (ರಿ)